Saturday, November 29, 2008

ವೀರ ಯೋಧ ಸಂದೀಪ್ ಗೆ ನಮನ


ಉಗ್ರರ ವಿರುದ್ಧ ಹೋರಾಡಿ ವೀರ ಮರಣ ಅಪ್ಪಿದ ಬೆಂಗಳೂರು ನಿವಾಸಿ ಮೇಜರ್ ಸಂದೀಪ್ ಉನ್ನಿಕೃಷ್ಣನ್ ವೀರ ಮರಣ ಸದಾ ಸ್ಮರಣೀಯ. ಅಪರೇಷನ್ ಸೈಕ್ಲೋನ್ ಯಶಸ್ವಿ ಕಾರ್ಯಾಚರಣೆಯಲ್ಲಿ ಹೋರಾಟ ನಡೆಸಿ ಪ್ರಾಣತೆತ್ತು ಹುತಾತ್ಮರಾದ ಭಯೋತ್ಪಾದಕ ನಿಗ್ರಹ ದಳದ(ATS) ಮುಖ್ಯಸ್ಥ ಹೇಮಂತ್ ಕರ್ಕರೆ, ಜಂಟಿ ಪೊಲೀಸ್ ಕಮೇಷನರ್ ಅಶೋಕ್ ಕಾಮ್ಟೆ, ಎನ್ ಕೌಂಟರ್ ಸ್ಪೆಷಲಿಸ್ಟ್ ವಿಜಯ್ ಸಲಸ್ಕರ್,ಎನ್ ಎಸ್ ಜಿ ಕಮಾಂಡೊ ಗುರ್ಜರ್ ಸಿಂಗ್ ಸೇರಿದಂತೆ ಎಲ್ಲಾ ಯೋಧರಿಗೂ ನಮ್ಮ ಸಲಾಂ

Read more...

Saturday, July 26, 2008

ಅಂದದೂರು ಬೆಂಗಳೂರ ನಿದ್ದೆಗೆಡಿಸಿದ ಸರಣಿ ಬಾಂಬ್ ಸ್ಫೋಟಕ್ಕೆ ಧಿಕ್ಕಾರಶುಕ್ರವಾರ(ಜು. 25) ರಂದು ನಗರದಲ್ಲಿ ಕಡೆ ೯ ಸ್ಫೋಟ ಸಂಭವಿಸಿದ್ದು ಬೆಂಗಳೂರಿನ ಜನತೆಯಲ್ಲಿ ತಲ್ಲಣವನ್ನು ಉಂಟುಮಾಡದ ದುಷ್ಕರ್ಮಿಗಳಿಗೆ ಧಿಕ್ಕಾರ. ಮಳೆಯಿಂದ ತಂಪಾಗಿದ್ದ ಬೆಂಗಳೂರಿನ ಒಡಲಲ್ಲಿ ಸರಣಿ ಸ್ಫೋಟದ ಮೂಲಕ ಭೀತಿಯ ಬಿಸಿಯನ್ನು ಹುಟ್ಟುಹಾಕುವಲ್ಲಿ ಯಶಸ್ವಿಯಾದ ಉಗ್ರರು, ಮುಂಬರುವ ಆಗ್ನಿಪ್ರವಾಹದ ಮುನ್ಸೂಚನೆ ನೀಡಿದ್ದಂತಿದೆ.

ನಾಗರೀಕರೇ, ಹೆದರದಿರಿ, ಬಾಂಬ್ ಸಂಸ್ಕೃತಿ ನಮಗೆ ಹೊಸದಿರಬಹುದು ಆದರೆ ಈ ರೀತಿಯ ದುಷ್ಕೃತ್ಯ ಹೊಸದೇನಲ್ಲ. ಎಲ್ಲ ಸಹಿಸಿಯೂ ಒಗ್ಗಟ್ಟಾಗಿ ಧೈರ್ಯದಿಂದ ಎದುರಿಸೋಣ. ರಾಜ್ಯದ ಪೊಲೀಸರಿಗೆ ನೆರವಾಗಿ, ಹೇಡಿ ಉಗ್ರರನ್ನು ಹಿಡಿಯಲು ಸಹಾಯ ಮಾಡೋಣ.

ನಿಮ್ಮ ಸುತ್ತಮುತ್ತ್ಲಲಿನ ಪ್ರದೇಶಗಳಲ್ಲಿ ಸ್ಫೋಟಕ ವಸ್ತುಗಳು ಅಥವಾ ಅನುಮಾನಸ್ಪದ ವಸ್ತುಗಳು ಕಂಡು ಬಂದಲ್ಲಿ ತಕ್ಷಣ ಪೊಲೀಸರಿಗೆ ತಿಳಿಸಿ. ಸ್ಫೋಟಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದವರಿಗೆ ಲಕ್ಷ ರೂ ಬಹುಮಾನವನ್ನು ಸರ್ಕಾರ ಘೋಷಿಸಿದೆ.

ಸ್ಫೋಟಕ ವಸ್ತು ಪತ್ತೆ ಹೇಗೆ?
ಜನನಿಬಿಡ ಸ್ಥಳಗಳಲ್ಲಿ, ಮೋರಿಗಳ ಬಳಿ ನಿಗೂಢ ವಸ್ತುವಿನ ರೂಪದಲ್ಲಿರಬಹುದು. ಪ್ಲಾಸ್ಟಿಕ್ ಡಬ್ಬ, ಕಬ್ಬಿಣದ ಫ್ಲವರ್ ಪಾಟ್, ಟಿಫಿನ್ ಬಾಕ್ಸ್ , ಸೂಟ್ ಕೇಸ್, ಸೈಕಲ್, ಶಂಕಾಸ್ಪದ ಚೀಲಗಳಲ್ಲಿ ಬಾಂಬ್ ಇಟ್ಟಿರುವ ಸಾಧ್ಯತೆಗಳಿರುತ್ತದೆ. ಈ ರೀತಿಯ ವಸ್ತುಗಳು ಕಂಡು ಬಂದರೆ ತಕ್ಷಣ ಈ ಕೆಳಗಿನ ಸಂಖ್ಯೆಗಳಿಗೆ ಕರೆ ಮಾಡಿ:
ಪೊಲೀಸ್ ಕಂಟ್ರೋಲ್ ರೂಂ: 080-2225 0999
080-2294 2222
080-2221 5911
080-2294 2111
080-2294 2777

ನಾಗರೀಕರು ಸಂಯಮದಿಂದ ವರ್ತಿಸಿ, ಪೊಲೀಸರಿಗೆ ಅಗತ್ಯ ಮಾಹಿತಿ ನೀಡಿದರೆ ಉಗ್ರರನ್ನು ಮಟ್ಟ ಹಾಕಲು ಸಾಧ್ಯವಾದೀತು. ಕೋರಮಂಗಲ ಬಳಿಯ ಫೋರಂ ಮಾಲ್ ನ ಬಾಂಬನ್ನು ನಾಗರೀಕರೊಬ್ಬರು ಕೊಟ್ಟ ಸಣ್ಣ ಸುಳಿವಿಂದ ಸಮಯಕ್ಕೆ ಸರಿಯಾಗಿ ನಿಷ್ಕ್ರಿಯಗೊಳಿಸಲು ಸಾಧ್ಯವಾಗಿದೆ. ಸಜೀವ ಬಾಂಬನ್ನು ನಿಷ್ಕ್ರಿಯಗೊಳಿಸಿದ ಸುಕುಮಾರನ್ ಅವರಿಗೆ ಅಭಿನಂದನೆಗಳು.

ಬೆಂಗಳೂರಿನಿಂದ ಅಹಮದಾಬಾದ್ ನೆಡೆಗೆ ಸಾಗಿದ ಉಗ್ರದ ಬಾಂಬ್ ದಾಳಿ: 19 ಕ್ಕೂ ಸಾವು, ನೂರಕ್ಕೂ ಅಧಿಕ ಜನರು ಗಾಯಾಳುವಾಗಿದ್ದಾರೆ.

ಹೆಚ್ಚಿನ ಸುದ್ದಿಗೆ:

ಸಜೀವ ಬಾಂಬ್ ಇಟ್ಟವನ ಗುರುತು ಪತ್ತೆ: ಬಿದರಿ

Read more...

Saturday, April 12, 2008

ನರಕ ದರ್ಶನ :ಫುಟ್ ಬೋರ್ಡ್ ಪಯಣ, ಆಪಾಯಕ್ಕೆ ಆಹ್ವಾನದಿನೇ ದಿನೇ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಸ್ತಿ ಆಗ್ತಿದೆ. ಇದಕ್ಕೆ ಹೆಚ್ಚುತ್ತಿರುವ ವಾಹನಗಳು ಮುಖ್ಯ ಕಾರಣ. ಖಾಸಗಿ ವಾಹನಗಳ ಸಂಖ್ಯೆ ಜಾಸ್ತಿ ಆದ್ರೂನೂ ಬೆಂಗಳೂರು ಮಹಾನಗರ ಸಾರಿಗೆಯ (ಬಿ.ಎಂ.ಟಿ.ಸಿ) ಬಸ್ಸುಗಳಲ್ಲಿಪ್ರಯಾಣಿಸುವವರ ಸಂಖ್ಯೆಯಂತೂ ಕಡಿಮೆ ಆಗಿಲ್ಲ.

ವಿದ್ಯಾರ್ಥಿಗಳಿಗೆ ರಿಯಾಯತಿ ದರದಲ್ಲಿ ವಾರ್ಷಿಕ ಹಾಗೂ ಉದ್ಯೋಗಿಗಳಿಗೆ ಮಾಸಿಕ ಪಾಸ್‌ಗಳನ್ನು ಬಿ.ಎಂ.ಟಿ.ಸಿ ವಿತರಿಸಿದೆ. ಇದರಿಂದ ಉದ್ಯೋಗಿಗಳು ಕೆಲಸಕ್ಕೆ ಹೋಗುವಾಗ ಮತ್ತು ವಿದ್ಯಾರ್ಥಿಗಳು ಶಾಲೆ ಮತ್ತು ಕಾಲೇಜುಗಳಿಗೆ ಹೋಗುವಾಗ ಹೆಚ್ಚಿಗೆ ಬಿ.ಎಂ.ಟಿ.ಸಿ. ಬಸ್ಸುಗಳಲ್ಲೇ ಪ್ರಯಾಣ ಮಾಡುತ್ತಾರೆ. ಇದರೊಂದಿಗೆ ೨೫ ರೂಪಾಯಿಯ ದಿನದ ಪಾಸ್‌ಗಳಿಂದಲಂತೂ ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗುತ್ತಿದೆ.

ಇದರಿಂದ ಶುರುವಾಗಿರೋ ಒಂದು ತೊಂದರೆ ಎಂದರೆ 'ಫುಟ್‌ಬೋರ್ಡ್ ಪ್ರಯಾಣ'. ಕೆಲವು ಬಸ್ಸುಗಳಲ್ಲಂತೂ ಬಹುತೇಕ ಜನರು ಫುಟ್‌ಬೋರ್ಡ್ ಮೇಲೆಯೇ ಪ್ರಯಾಣ ಮಾಡುತ್ತಾರೆ. ಈ ೨೫ ರೂ. ಪಾಸ್ ಪಡೆದವರಂತೂ ಒಂದು ಬಸ್‌ನಿಂದ ಇನ್ನೊಂದು ಬಸ್, ಇನ್ನೊಂದು ಬಸ್ಸಿನಿಂದ ಮತ್ತೊಂದು ಬಸ್‌ಗೆ ಹಾರುತ್ತಲೇ ಇರ್ತಾರೆ! ಇವರಂತೂ ಹೆಚ್ಚಿನ ಸಮಯ ಇರೋದು ಫುಟ್‌ಬೋರ್ಡ್ ಮೇಲೆ. ಇಂಥವರನ್ನು ನಿರ್ವಾಹಕರು ಮೇಲೆ
ಹತ್ತಿ ಅಂದ್ರೆ next stopನಲ್ಲಿ ಇಳೀತಿವಿ ಸರ್' ಅಂತ ಹೇಳಿ ಫುಟ್‌ಬೋರ್ಡ್ ಮೇಲೇನೇ ನಿಂತಿರುತ್ತಾರೆ.

ಇನ್ನು ಕಾಲೇಜು ಹುಡುಗರ ವಿಷಯಕ್ಕೆ ಬಂದರೆ ಅವರೆಲ್ಲ ಪ್ರಯಾಣ ಮಾಡೋದು ಫುಟ್‌ಬೋರ್ಡ್ ಮೇಲೇನೇ! ಇವರಿಗೆಲ್ಲ ಇದೊಂದು ಟ್ರೆಂಡ್ ಆಗಿ ಬಿಟ್ಟಿದೆ. ನಿರ್ವಾಹಕರು ಹೇಳಿದರೂ ಕೇಳೋಲ್ಲ, ಯಾರು ಹೇಳಿದರೂ ಕೇಳೋಲ್ಲ. ಹೀಗೆ ಫುಟ್‌ಬೋರ್ಡ್ ಪ್ರಯಾಣ ಮಾಡೋರಿಗೆ ಸಂಚಾರಿ ಆರಕ್ಷಕರು 100 ರೂಗಳ ದಂಡವನ್ನು ವಿಧಿಸುತ್ತಾರೆ. ಆದರೂ ನಮ್ ಜನ ಫುಟ್‌ಬೋರ್ಡ್ ಮೇಲೆ ನಿಂತು ಹೋಗೋದನ್ನು ತಪ್ಪಿಸೋಲ್ಲ. ಎಷ್ಟೋ ಬಾರಿ ನಿರ್ವಾಹಕರಿಗೂ ಒಳ ಹೋಗೋಕೆ ಜಾಗ ಇಲ್ಲದೇ ಅವರೂ ಸಹ ಫುಟ್‌ಬೋರ್ಡ್ ಮೇಲೇನೇ ನಿಂತು ಟಿಕೇಟುಗಳನ್ನು ಕೊಡುತ್ತಿರುತ್ತಾರೆ. ಪ್ರಯಾಣಿಕರ ಸುರಕ್ಷತೆಗಾಗಿ ಬಿ.ಎಂ.ಟಿ.ಸಿ ಬಸ್ಸುಗಳಿಗೆ ಚಾಲಕ ನಿಯಂತ್ರಿತ ಬಾಗಿಲುಗಳನ್ನು ಅಳವಡಿಸಲಾಯಿತು.

ಆದರೆ ಎಷ್ಟೋ ಚಾಲಕರು ಈ ಬಾಗಿಲುಗಳನ್ನು ಹಾಕೋದಿಲ್ಲ. ಎಷ್ಟೋ ಬಾಗಿಲುಗಳು ಕೆಲಸವನ್ನೇ ಮಾಡುವುದಿಲ್ಲ! ಅಂತಹ ಸಮಯದಲ್ಲಿ ಪ್ರಯಾಣಿಕರು ಒಳಗೆ ಜಾಗವಿದ್ದರೂ ಫುಟ್‌ಬೋರ್ಡ್ ಮೇಲೇನೇ ನಿಂತು ಪ್ರಯಾಣಿಸುತ್ತಾರೆ. ಹೀಗೆ ಪ್ರಯಾಣ ಮಾಡೋದರಿಂದ ಜೇಬುಗಳ್ಳರಿಗೆ ಸುಗ್ಗಿಯೋ ಸುಗ್ಗಿ! ತಿಂಗಳ ಕೊನೆ ಹಾಗೂ ಮೊದಲ ವಾರಗಳಲ್ಲಿ ಜೇಬುಗಳ್ಳರು ಬೇರೆಯರ ಜೇಬಿಗೆ ಕತ್ರಿ ಹಾಕಿ ತಮ್ಮ ಜೇಬನ್ನು ತುಂಬಿಸಿಕೊಳ್ತಾರೆ. ಇನ್ನು ಕೆಲವು ಪ್ರಯಾಣಿಕರು ಟಿಕೇಟ್ ಪಡೆಯದೇ ಪ್ರಯಾಣ ಮಾಡುತ್ತಾರೆ. ಅಂಥವರು ನಿರ್ವಾಹಕರು ಯಾವ ಕಡೆ ಇರ್ತಾರೆ ಅಂತ ನೋಡಿ, ಅವರಿಲ್ಲದ ಕಡೆಯಿಂದ ಹತ್ತಿ ಪ್ರಯಾಣ ಮಾಡುತ್ತಾರೆ.

'ದಯವಿಟ್ಟು ಫುಟ್‌ಬೋರ್ಡಿನ ಮೇಲೆ ಪ್ರಯಾಣಿಸಬೇಡಿ. ಇದರಿಂದ ನಿಮ್ಮ ಅಮೂಲ್ಯ ಜೀವನ ಅಪಘಾತಕ್ಕೀಡಾಗಬಹುದು. ಅದಲ್ಲದೆ ಹತ್ತುವ ಮತ್ತು ಇಳಿಯುವ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ. ಫುಟ್‌ಬೋರ್ಡ್ ಪ್ರಯಾಣ ಆದೀತು ನಿಮ್ಮ ಕೊನೆ ಪ್ರಯಾಣ ಇಂತಹ ಫಲಕಗಳನ್ನು ಸಹ ಬಸ್ಸುಗಳ ಒಳಗೆ ಹಾಕಿರ್ತಾರೆ. ಆದರೆ ಇದನ್ನ ನೋಡೋಕೂ ಸಹ ಒಳಗೆ ಬರೊಲ್ಲ. ಹೀಗೆ ಫುಟ್‌ಬೋರ್ಡ್ ಮೇಲೆ ಪ್ರಯಾಣಿಸುವವರು ಎಷ್ಟೋ ಜನ ರಸ್ತೆ ಅಪಘಾತಗಳಲ್ಲಿ ಮೃತಪಟ್ಟಿದ್ದಾರೆ. ಅಪಘಾತವಾದಾಗ ಕೆಲವರು ಹಿಂದೂ ಮುಂದು ನೋಡದೇ ಬಸ್ಸುಗಳ ಗಾಜನ್ನು ಒಡೆದು ಬಸ್ಸುಗಳಿಗೆ ಬೆಂಕಿ ಹಚ್ಚಿ ಸಾರ್ವಜನಿಕ ಆಸ್ತಿಗೆ ಹಾನಿ ಮಾಡುತ್ತಾರೆ. ಕೆಲವು ಮಾರ್ಗಗಳಲ್ಲಿ ಸಮಯಕ್ಕೆ ಸರಿಯಾಗಿ ಬಸ್ಸುಗಳು ಇರೋದಿಲ್ಲ ಹಾಗೂ ಕಡಿಮೆ ಬಸ್ಸುಗಳಿರುತ್ತವೆ. ಅಂತಹ ಕಡೆಗಳಲ್ಲಿ ಪ್ರಯಾಣಿಕರಿಗೆ ಒಳಗೆ ಹೋಗೋಕೆ ಜಾಗವಿಲ್ಲದೇ ಫುಟ್‌ಬೋರ್ಡ್ ಪ್ರಯಾಣ ಅನಿವಾರ್ಯವಾಗಿಬಿಡುತ್ತದೆ. ಇಂತಹ ಕೆಲವು ಮಾರ್ಗಗಳಲ್ಲಿ ಬೆಳಗಿನ ಹಾಗೂ ಸಂಜೆಯ ಸಮಯದಲ್ಲಿ ಇನ್ನೂ ಹೆಚ್ಚಿನ ಬಸ್ಸುಗಳನ್ನು ಒದಗಿಸಿದರೆ ಪ್ರಯಾಣಿಕರಿಗೆ ಉಪಯೋಗವಾಗುತ್ತದೆ ಹಾಗು ಫುಟ್‌ಬೋರ್ಡ್ ಪ್ರಯಾಣವೂ ಸ್ವಲ್ಪ ಕಡಿಮೆಯಾಗುವ ಸಾಧ್ಯತೆ ಇದೆ.

ಬರಹ: ವೀರೇಶ ಹೊಗೆಸೊಪ್ಪಿನವರ್
ಚಿತ್ರಗಳು: ಆನಂದ ಅಂದಲಗಿ

Read more...

Friday, March 21, 2008

ನರಕ ದರ್ಶನ : ಟ್ರಾಫಿಕ್! ಟ್ರಾಫಿಕ್! ಟ್ರಾಫಿಕ್!


ಬಾರೋ ನಮ್ ಆಫೀಸ್‌ಗೆ,
ಎಲ್ಲೋ ನಿಮ್ಮ ಆಫೀಸು?
ಕೋರಮಂಗಲ ಕಣೋ,
ಅಯ್ಯೋ ಕೋರಮಂಗಲನಾ?

ಹೊಗೋ, ನಾನಿರೋದು ಮಲ್ಲೇಶ್ವರಂ. ಇಲ್ಲಿಂದ ಅಲ್ಲಿಗೆ ಬರೋಕೆ ಏನಿಲ್ಲ ಅಂದ್ರು ಒಂದರಿಂದ ಒಂದೂವರೆ ಗಂಟೆಗಳು ಬೇಕು! ನಾನು ಬರೋಲ್ಲ ಹೋಗೋ. ಇಂತಹ ಸಂಭಾಷಣೆ ಬೆಂಗಳೂರಿನಲ್ಲಿ ಸಾಮಾನ್ಯ. ಎಲ್ಲಿ ನೋಡಿದರೂ ಟ್ರಾಫಿಕ್! ಟ್ರಾಫಿಕ್! ಟ್ರಾಫಿಕ್! flyover ಮೇಲಿಂದ ರಸ್ತೆಯ ತುದಿಯವರೆಗೂ ವಾಹನಗಳು ನಿಂತಿರುತ್ತವೆ. ಯಾಕೆ ಹೀಗೆ ನಿಂತಿರುತ್ತೆ ಅಂತ ನೋಡಿದರೆ ಎಷ್ಟೋಂದು ಕಾರಣಗಳು ಸಿಗುತ್ತವೆ. ಅಂತಹವುಗಳಲ್ಲಿ ಕೆಲವುಗಳು ಇಲ್ಲಿವೆ ನೋಡಿ.

ಕೆಲವು ಕಡೆ ಸಿಗ್ನಲ್‌ಗಳ ಬಳಿಯೇ ಎಷ್ಟೋ ಪ್ರಯಾಣಿಕರು ಬಸ್ಸುಗಳಿಗಾಗಿ ಕಾಯ್ತಾ ಇರುತ್ತಾರೆ. ಅಂತಹ ಸಮಯದಲ್ಲಿ ಬಸ್ ಹತ್ತೋಕೆ ಜನ ಹೋದ್ರೆ. ಆ ಬಸ್ಸಿನ ಹಿಂದೆ ಎಷ್ಟೋ ಗಾಡಿಗಳು ನಿಂತಿರುತ್ತೆ. ಕೆಲವು ಕಡೆಗಳಲ್ಲಂತೂ ೩೦ ಸೆಕೆಂಡಿಗೆ ಸಿಗ್ನಲ್‌ಗಳಿರುತ್ತವೆ. ಬಸ್ಸುಗಳೇ ೩೦ ಸೆಕೆಂಡು ಸಮಯವನ್ನು ಮತ್ತೆ ನುಂಗಿ ಬಿಡುತ್ತವೆ. ಹಿಂದಿರುವ ವಾಹನಗಳಿಗೆ ಮತ್ತೆ ಹಸಿರು ನಿಶಾನೆಗೆ ಕಾಯುವ ಶಿಕ್ಷೆ. ಅಂತಹ ಸ್ಥಳಗಳಲ್ಲಿ ಸಾಲಾಗಿ ವಾಹನಗಳು ನಿಂತಿರದೇ ಬೇರೇ ವಿಧಿಯೇ ಇಲ್ಲ. ಇನ್ನು ಕೆಲವರು ತಮ್ಮ ದ್ವಿಚಕ್ರ ವಾಹನಗಳಲ್ಲಿ ಅತಿ ಹೆಚ್ಚು ಭಾರವಾದ ಹಾಗು ಅಗಲವಾದ ವಸ್ತುಗಳನ್ನು ಇಟ್ಟುಕೊಂಡು ಹೋಗ್ತಿರುತ್ತಾರೆ. ಅಂತಹ ಸಮಯದಲ್ಲಿ ಹಿಂದಿರುವ ವಾಹನಗಳಿಗೂ ಮುಂದೆ ಜಾಗ ಇರೋಲ್ಲ. ಮತ್ತೆ ಅವರಿಗೂ ಹೋಗೋಕೂ ಆಗೊಲ್ಲ. ಇಂತಹ ಸಮಯದಲ್ಲಿ ಸಾಲುಸಾಲಾಗಿ ವಾಹನಗಳು ನಿಂತಿರುತ್ತವೆ. ಹಲವರು ರಸ್ತೆ ಬಿಟ್ಟು ಫುಟ್ ಪಾತ್ ಮೇಲೆ ವಾಹನವನ್ನು ರಭಸವಾಗಿ ಚಲಿಸುತ್ತಾರೆ. ಇದರಿಂದ ಪಾದಚಾರಿಗಳಿಗೂ ತೊಂದರೆ, ವಾಹನ ಚಾಲಕರಿಗೂ ಕೂಡ.

ಇತ್ತೀಚೆಗಂತೂ ದ್ವಿಚಕ್ರ ವಾಹನ ಸವಾರರಲ್ಲಿ ಮೊಬೈಲ್ ಬಳಕೆ ಹೆಚ್ಚಾಗಿದೆ. ಮೊಬೈಲ್‌ನಲ್ಲಿ ಮಾತನಾಡುವುದಕ್ಕಿಂತ ಎಂ.ಪಿ.೩, ಎಫ್.ಎಂ. ಹೀಗೆ ಮನರಂಜನೆಗೆ ಮೊಬೈಲನ್ನು ಬಳಸುವವರೇ ಹೆಚ್ಚು. ಆಗ ಸವಾರರ ಗಮನ ಹೆಚ್ಚಾಗಿ ಸಂಗೀತದ ಕಡೆ ಇರುತ್ತದೆ ಮತ್ತು ಮುಂದಿರುವ ವಾಹನವನ್ನು ಹಿಮ್ಮೆಟ್ಟಿಸುವ ಹಟದಿಂದ ವೇಗವಾಗಿ ಹೋಗಲು ಪ್ರಯತ್ನಿಸುತ್ತಾರೆ. ಅಂತಹ ಸಮಯದಲ್ಲಿ ದೊಡ್ಡ ವಾಹನಗಳಿಗೆ ಹೋಗೋಕೆ ಜಾಗ ಇಲ್ಲದೇ ಟ್ರಾಫಿಕ್ ಜಾಮ್ ಆಗೋ ಸಾಧ್ಯತೆಗಳಿರುತ್ತದೆ. ಇತ್ತೀಚೆಗೆ ದ್ವಿಚಕ್ರ ವಾಹನಗಳು ಹಾಗೂ ಕಾರು ಮುಂತಾದ ವಾಹನಗಳ ದಟ್ಟಣೆ ಜಾಸ್ತಿ ಆಗ್ತಿದೆ. ಪಕ್ಕದ ಬೀದಿಗೆ ಹೋಗಬೇಕು ಅಂದ್ರೂ ದ್ವಿಚಕ್ರ ವಾಹನ ತಗೊಂಡು ಹೊಗ್ತಾರೆ. ಇನ್ನು ಎಷ್ಟೋ ಜನ ಪಾರ್ಕ್‌ಗಳಿಗೆ ವ್ಯಾಯಾಮಕ್ಕೆಂದು ಹೋಗುವಾಗ ತಮ್ಮ ವಾಹನವನ್ನು ತಗೊಂಡು ಹೋಗ್ತಾರೆ. ಇಂತಹ ಕಡೆ ಹೋಗುವಾಗಲಾದ್ರೂ ನಡೆದುಕೊಂಡು ಹೋದ್ರೆ ಸ್ವಲ್ಪ ಪ್ರಮಾಣದಲ್ಲಾದ್ರು ಟ್ರಾಫಿಕ್ ನ ತಡೆಗಟ್ಟಬಹುದು.

ಹೀಗೆ ಎಷ್ಟೋ ಕಾರಣಗಳಿಂದ ನಗರದಲ್ಲಿ ಟ್ರಾಫಿಕ್ ಜಾಮ್ ಆಗುತ್ತಿರುತ್ತೆ. ಇದಕ್ಕೆಲ್ಲ ಕಾರಣ ನಾವೇ. ನಾವು ಎಚ್ಚೆತ್ತುಕೊಂಡು ಸಂಚಾರಿ ನಿಯಮಗಳನ್ನು ಪಾಲಿಸುತ್ತಾ ಹೋದರೆ ಸ್ವಲ್ಪ ಮಟ್ಟಿಗಾದರೂ ಟ್ರಾಪಿಕ್ಕನ್ನು ಕಡಿಮೆ ಮಾಡಬಹುದು. ನೀವೇನಂತೀರಾ?

ಚಿತ್ರ ಹಾಗೂ ಬರಹ: ವೀರೇಶ್ ಹೊಗೆಸೊಪ್ಪಿನವರ್

Read more...

Monday, March 17, 2008

ನಾನು ಇ-ಜ್ಞಾನಿ ಆಗಿಬಿಟ್ಟೆ

ಸ್ನೇಹಿತ ಟಿ.ಜಿ. ಶ್ರೀನಿಧಿ ನಮ್ಮ ಬ್ಲಾಗ್ ನ ಲೇಖನ ವೊಂದನ್ನು ತಮ್ಮ ಇ-ಜ್ಞಾನ -ವಿಜ್ಞಾನ ವಿಷಯಗಳಿಗೆ ಮೀಸಲಾಗಿರುವ ಕನ್ನಡ ಬ್ಲಾಗ್ ನಲ್ಲಿ ಹಾಕಿದ್ದಾರೆ. ಈ ಮೂಲಕ ಇ -ಜ್ಞಾನಿ ಮಾಡಿಬಿಟ್ಟಿದ್ದಾರೆ. ಧನ್ಯವಾದಗಳು.

Read more...

ಹಾಡು ಕೇಳಿ

ಟ್ರಾಫಿಕ್ ಮಾಹಿತಿ

  © Free Blogger Templates Spain by Ourblogtemplates.com 2008

Back to TOP