Thursday, February 28, 2008

ನರಕ ದರ್ಶನ-೨: It's urgent and Important ಕಂಡ್ರಿ



'ಯಾಕ್ರಿ ಹಿಂಗೆ ಸಿಕ್ಕಿದ ಕಡೆ ಗಲೀಜು ಮಾಡ್ತೀರ' ಅಂತ ಕೇಳಿದರೆ,

'ಏನು ಮಾಡೋದು ಅರ್ಜೆಂಟ್ ಆದಾಗ ಸಿಕ್ಕಿದ ಕಡೆ ಉಯ್ಯಬೇಕಾಗುತ್ತೆ' ಅಂತ ಜನ ಹೇಳ್ತಾರೆ.

ಈಗ ನಗರದ ನಾನಾ ಕಡೆ ಸುಧಾಕ್ಕ ಕಟ್ಟಿಸಿದ 'ನಿರ್ಮಲ ಬೆಂಗಳೂರು' ಶೌಚಾಲಯಗಳಿವೆ. ಸುಮಾರು ವರ್ಷದಿಂದ ಸುಲಭ್ ಶೌಚಾಲಯಗಳು ಬಾಗಿಲು ತೆಗೆದುಕೊಂಡು ಕಾದು ಕುಂತಿವೆ. ಆದ್ರೂ ನಮ್ ಜನದುಡ್ಡು ಕೊಟ್ಟೆ ಮೂತ್ರ ಮಾಡೋದಾ..... ಛೆ ಇಲ್ಲಾ ಬಿಡಿ, ಅಂತಹ ಒಳ್ಳೆ ಕೆಲಸ ನಮ್ ಬೆಂಗ್ಳೂರು ಮಂದಿ ತಲೆಗೆ ಹೊಳೆಯೋದಿಲ್ಲ ಬಿಡಿ.

'ಗೋಡೆ ಮೇಲೆ ಇಲ್ಲಿ ಗಲೀಜು ಮಾಡಿದರೆ ದಂಡ ವಿಧಿಸಲಾಗುವುದು' ಅಂತ ಬರೆದ್ರೂ ಜನ ಹುಡುಕಿಕೊಂಡು ಅದೇ ಗೋಡೆ ಮೇಲೆ ವಿಸರ್ಜನೆ ಮಾಡುತ್ತಾರೆ ಅನ್ನೋದೇ ವಿಪರ್ಯಾಸ. ಬೆಂಗ್ಳೂರು ನಮ್ ಊರು ಅನ್ನೋ ಕಾಳಜಿ ಇದ್ದರೆ ಹಿಂಗೆಲ್ಲಾ ಆಗೋಲ್ಲ ಬಿಡಿ... ಮನಸ್ಸು ಶುದ್ಧವಾಗಿದ್ರೆ ಮನೆ ಸುತ್ತಾನೂ ಕ್ಲೀನ್ ಆಗಿರುತ್ತೆ ಅಲ್ವಾ?

ಬರಹ:ಮಲೆನಾಡಿಗ
ಚಿತ್ರ: ಮಲ್ನಾಡ್ , ವೀರೇಶ್ ಹೊಗೆಸೊಪ್ಪಿನವರ್
ಸ್ಥಳ: ಮಲ್ಲೇಶ್ವರ ೧೮ ನೇ ಅಡ್ಡರಸ್ತೆ

Read more...

Wednesday, February 27, 2008

ಬೆಂಗಳೂರು ನರಕ ದರ್ಶನ ಮಾಲಿಕೆ: ಮೊದಲ ಬಾಗಿಲು

ಅರಿಕೆ
ಬೆಂಗಳೂರು ಅಕ್ಷರಶಃ ಸ್ವರ್ಗ ಸಮಾನ ನಗರಿ ಇದನ್ನು ನರಕವನ್ನಾಗಿಸುತ್ತಿರುವ ಕೆಲ ವ್ಯಕ್ತಿಗಳ, ಸಮೂಹಗಳ ವಿರುದ್ಧ ಮನದಲ್ಲಿ ಏಳುವ ಕಿಡಿಯನ್ನು ಅಕ್ಷರ ರೂಪದಿ ತೋರ್ಪಡಿಸುತ್ತಾ ನಮ್ಮ ಹೊಟ್ಟೆಯ ಸಂಕಟವನ್ನು ತೋರ್ಪಡಿಸುವ ಸಣ್ಣ ಪ್ರಯತ್ನ. ನಮ್ಮ ಸುಂದರ ನಗರಿಯನ್ನು ಹಳಿಯಲು ತೊಡಗುವ ಮೊದಲು ಒಮ್ಮೆ ಯೋಚಿಸಿ. ಏತಕ್ಕೆ ಈ ನಗರ ಹೀಗಾಯ್ತು, ಯಾರು ಕಾರಣ. ಏನು ಮಾಡಿದರೆ ಪರಿಸ್ಥಿತಿ ಸಮಸ್ಥಿತಿಗೆ ಬರುತ್ತಿದೆ ಎಂದು.

ನಮ್ಮ ನಾಲ್ಕರು ಲೇಖನಗಳು ಮಹಾನಗರದ ಜನತೆಯನ್ನು ಆಲೋಚನೆಯ ಲಹರಿಗೆ ಹಚ್ಚಿದರೆ ಸಾಕು ಮುಂದಿನದು ತನ್ನಿಂದಾತಾನೇ ಸರಿಹೋಗುತ್ತದೆ ಎಂಬ ಆಶಯದೊಂದಿಗೆ ಈ ಲೇಖನಮಾಲೆ ಆರಂಭಿಸುತ್ತಿದ್ದೇವೆ. ಈ ಲೇಖನಗಳು ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿ ಪ್ರಕಟಿತವಾಗಿದೆ. ಇದಕ್ಕೆ ಕಾರಣರಾದ ರವಿಕೃಷ್ಣಾ ರೆಡ್ಡಿ, ಸತ್ಯಮೂರ್ತಿ ಆನಂದೂರು, ರಾಜಲಕ್ಷ್ಮಿ ಕೋಡಿಬೆಟ್ಟು, ರವೀಂದ್ರ ರೇಷ್ಮೆ ಹಾಗೂ ಇನ್ನಿತರ ಸಿಬ್ಬಂದಿ ವರ್ಗದವರಿಗೆ ನಾವು ಆಭಾರಿಗಳಾಗಿದ್ದೇವೆ.

ಸಮಸ್ಯೆಗಳು ಅದಕ್ಕೆ ಪರಿಹಾರ ಇದ್ದಿದೆ. ಆತ್ಮೀಯ ಬ್ಲಾಗ್ ಮಿತ್ರರಲ್ಲಿ ಮನವಿ/ ಅರಿಕೆ ಏನೆಂದರೆ ಈ ಬ್ಲಾಗ್ ನಿರಂತರವಾಗಿ ಇರಲು ನಿಮ್ಮಗಳ ಸಹಕಾರ ಅತ್ಯಗತ್ಯ. ಬೆಂಗಳೂರಿನ ಸಮಸ್ಯೆಗಳನ್ನು ಕುರಿತಾದ ನಿಮ್ಮ ಈಗಾಗಲೇ ಪ್ರಕಟಿತ ಅಥವಾ ಹೊಸ ಲೇಖನಗಳು ಇದ್ದಲ್ಲಿ ದಯವಿಟ್ಟು ಇದು ನಿಮ್ಮ ಬ್ಲಾಗ್ ಎಂದು ತಿಳಿದು ಇದರಲ್ಲಿ ಪ್ರಕಟಿಸಿ. ನಿಮ್ಮ ಬ್ಲಾಗಿನಲ್ಲಿ ಹಾಕಿ ಕೊಂಡು ಇಲ್ಲಿ ಮುನ್ನುಡಿ ಬರೆದು ಅದರ ಬೆಸುಗೆಯನ್ನು ನೀಡಿದರೂ ಅಡ್ಡಿಯಿಲ್ಲ.

-ಇಂತಿ ನಿಮ್ಮ ಬೆಂಗಳೂರು ಮಿತ್ರರು

ಸರಿ, ನಮ್ಮ ಆ ದಿನಗಳಿಗೆ ಹಿಂದಿರುಗೋಣ.....

ಪ್ಲೇವಿನ್ ಜೊತೆಗೆ ಇತರ ಪ್ಲೇ ಗಳಿಗೂ ಪರವಾನಿಗೆ ದೊರೆಕಿತೆ?
ಪ್ಲೇವಿನ್‌ಗೆ... ಸರ್ಕಾರ ಪರವಾನಿಗೆ ಕೊಟ್ಟಿದ್ದೇ ತಡ ಪ್ಲೇವಿನ್ ಅಂಗಡಿ ಕಡೆಗೆ ಜನರ ನೂಕು ನುಗ್ಗಲು ಶುರುವಾಯಿತು. ಇದರ ಜೊತೆಗೆ ಇಲ್ನೋಡಿ ಇನ್ನೊಂದು ಪ್ಲೇ ಶುರುವಾಗಿದೆ. ಹಾದಿ ಬೀದಿಯಲ್ಲಿ ಜೂಜಾಡುವವರ ಸಂಖ್ಯೆ ಹೆಚ್ಚಾಗಿದೆ. ಹಾಡು ಹಗಲಲ್ಲೇ ನಗರದ ಪ್ರಮುಖ ರಸ್ತೆಗಳ ತಿರುವುಗಳಲ್ಲಿ, ಫ್ಲೈ ಓವರ್ ಕೆಳಗೆ, ಸಿಗ್ನಲ್ ಜಂಕ್ಷನ್‌ನಲ್ಲಿ ಎಲ್ಲೆಡೆಯಲ್ಲೂ ಗುಂಪು ಗುಂಪಾಗಿ ಜೂಜಾಟ ನಿರಂತರವಾಗಿ ಸಾಗಿದೆ. ಈ ಬಗ್ಗೆ ಪೊಲೀಸರಿಗೆ ದೂರಿತ್ತರೂ ಪ್ರಯೋಜನವಾಗಿಲ್ಲ.

ಅಲ್ಲಿಗೂ ಎಡಬಿಡದೆ ಆರಕ್ಷರನ್ನು ಕಾಡಿದಾಗ "ಅಲ್ಲಾ...ಸಾರ್ ಅದು ನಮ್ಮ ವ್ಯಾಪಿಗೆ ಬರೋಲ್ಲ ಬೇರೆ ಸ್ಟೇಷನ್ ಲಿಮಿಟ್ ಗೆ ಬರುತ್ತೆ. ನೋಡ್ತೀವಿ ಅಂತೆಲ್ಲಾ ಉತ್ತರಗಳು ಬಂತು. ಇದು ಸಿಟಿಯಿಂದ ಆಚೆ ಅಲ್ಲಾ ಸ್ವಾಮಿ ನಗರದ ಪ್ರತಿಷ್ಠಿತ ಬಡಾವಣೆಗಳಾದ ಕೋರಮಂಗಲ, ಜೆಪಿನಗರ, ಸೆಂಟ್ರಲ್ ಸಿಲ್ಕ್ ಬೋರ್ಡ್ ಗಳ ಆಸು ಪಾಸಿನಲ್ಲಿ ಕಾಣಬರುವ ನಿತ್ಯದರ್ಶನ.
ಅಕ್ಷರ:ಮಲೆನಾಡಿಗ
ಚಿತ್ರ: ವೀರೇಶ್ ಹೊಗೆಸೊಪ್ಪಿನವರ್

Read more...

ಹಾಡು ಕೇಳಿ

ಟ್ರಾಫಿಕ್ ಮಾಹಿತಿ

  © Free Blogger Templates Spain by Ourblogtemplates.com 2008

Back to TOP