Saturday, July 26, 2008

ಅಂದದೂರು ಬೆಂಗಳೂರ ನಿದ್ದೆಗೆಡಿಸಿದ ಸರಣಿ ಬಾಂಬ್ ಸ್ಫೋಟಕ್ಕೆ ಧಿಕ್ಕಾರ



ಶುಕ್ರವಾರ(ಜು. 25) ರಂದು ನಗರದಲ್ಲಿ ಕಡೆ ೯ ಸ್ಫೋಟ ಸಂಭವಿಸಿದ್ದು ಬೆಂಗಳೂರಿನ ಜನತೆಯಲ್ಲಿ ತಲ್ಲಣವನ್ನು ಉಂಟುಮಾಡದ ದುಷ್ಕರ್ಮಿಗಳಿಗೆ ಧಿಕ್ಕಾರ. ಮಳೆಯಿಂದ ತಂಪಾಗಿದ್ದ ಬೆಂಗಳೂರಿನ ಒಡಲಲ್ಲಿ ಸರಣಿ ಸ್ಫೋಟದ ಮೂಲಕ ಭೀತಿಯ ಬಿಸಿಯನ್ನು ಹುಟ್ಟುಹಾಕುವಲ್ಲಿ ಯಶಸ್ವಿಯಾದ ಉಗ್ರರು, ಮುಂಬರುವ ಆಗ್ನಿಪ್ರವಾಹದ ಮುನ್ಸೂಚನೆ ನೀಡಿದ್ದಂತಿದೆ.

ನಾಗರೀಕರೇ, ಹೆದರದಿರಿ, ಬಾಂಬ್ ಸಂಸ್ಕೃತಿ ನಮಗೆ ಹೊಸದಿರಬಹುದು ಆದರೆ ಈ ರೀತಿಯ ದುಷ್ಕೃತ್ಯ ಹೊಸದೇನಲ್ಲ. ಎಲ್ಲ ಸಹಿಸಿಯೂ ಒಗ್ಗಟ್ಟಾಗಿ ಧೈರ್ಯದಿಂದ ಎದುರಿಸೋಣ. ರಾಜ್ಯದ ಪೊಲೀಸರಿಗೆ ನೆರವಾಗಿ, ಹೇಡಿ ಉಗ್ರರನ್ನು ಹಿಡಿಯಲು ಸಹಾಯ ಮಾಡೋಣ.

ನಿಮ್ಮ ಸುತ್ತಮುತ್ತ್ಲಲಿನ ಪ್ರದೇಶಗಳಲ್ಲಿ ಸ್ಫೋಟಕ ವಸ್ತುಗಳು ಅಥವಾ ಅನುಮಾನಸ್ಪದ ವಸ್ತುಗಳು ಕಂಡು ಬಂದಲ್ಲಿ ತಕ್ಷಣ ಪೊಲೀಸರಿಗೆ ತಿಳಿಸಿ. ಸ್ಫೋಟಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದವರಿಗೆ ಲಕ್ಷ ರೂ ಬಹುಮಾನವನ್ನು ಸರ್ಕಾರ ಘೋಷಿಸಿದೆ.

ಸ್ಫೋಟಕ ವಸ್ತು ಪತ್ತೆ ಹೇಗೆ?
ಜನನಿಬಿಡ ಸ್ಥಳಗಳಲ್ಲಿ, ಮೋರಿಗಳ ಬಳಿ ನಿಗೂಢ ವಸ್ತುವಿನ ರೂಪದಲ್ಲಿರಬಹುದು. ಪ್ಲಾಸ್ಟಿಕ್ ಡಬ್ಬ, ಕಬ್ಬಿಣದ ಫ್ಲವರ್ ಪಾಟ್, ಟಿಫಿನ್ ಬಾಕ್ಸ್ , ಸೂಟ್ ಕೇಸ್, ಸೈಕಲ್, ಶಂಕಾಸ್ಪದ ಚೀಲಗಳಲ್ಲಿ ಬಾಂಬ್ ಇಟ್ಟಿರುವ ಸಾಧ್ಯತೆಗಳಿರುತ್ತದೆ. ಈ ರೀತಿಯ ವಸ್ತುಗಳು ಕಂಡು ಬಂದರೆ ತಕ್ಷಣ ಈ ಕೆಳಗಿನ ಸಂಖ್ಯೆಗಳಿಗೆ ಕರೆ ಮಾಡಿ:
ಪೊಲೀಸ್ ಕಂಟ್ರೋಲ್ ರೂಂ: 080-2225 0999
080-2294 2222
080-2221 5911
080-2294 2111
080-2294 2777

ನಾಗರೀಕರು ಸಂಯಮದಿಂದ ವರ್ತಿಸಿ, ಪೊಲೀಸರಿಗೆ ಅಗತ್ಯ ಮಾಹಿತಿ ನೀಡಿದರೆ ಉಗ್ರರನ್ನು ಮಟ್ಟ ಹಾಕಲು ಸಾಧ್ಯವಾದೀತು. ಕೋರಮಂಗಲ ಬಳಿಯ ಫೋರಂ ಮಾಲ್ ನ ಬಾಂಬನ್ನು ನಾಗರೀಕರೊಬ್ಬರು ಕೊಟ್ಟ ಸಣ್ಣ ಸುಳಿವಿಂದ ಸಮಯಕ್ಕೆ ಸರಿಯಾಗಿ ನಿಷ್ಕ್ರಿಯಗೊಳಿಸಲು ಸಾಧ್ಯವಾಗಿದೆ. ಸಜೀವ ಬಾಂಬನ್ನು ನಿಷ್ಕ್ರಿಯಗೊಳಿಸಿದ ಸುಕುಮಾರನ್ ಅವರಿಗೆ ಅಭಿನಂದನೆಗಳು.

ಬೆಂಗಳೂರಿನಿಂದ ಅಹಮದಾಬಾದ್ ನೆಡೆಗೆ ಸಾಗಿದ ಉಗ್ರದ ಬಾಂಬ್ ದಾಳಿ: 19 ಕ್ಕೂ ಸಾವು, ನೂರಕ್ಕೂ ಅಧಿಕ ಜನರು ಗಾಯಾಳುವಾಗಿದ್ದಾರೆ.

ಹೆಚ್ಚಿನ ಸುದ್ದಿಗೆ:

ಸಜೀವ ಬಾಂಬ್ ಇಟ್ಟವನ ಗುರುತು ಪತ್ತೆ: ಬಿದರಿ

Read more...

ಹಾಡು ಕೇಳಿ

ಟ್ರಾಫಿಕ್ ಮಾಹಿತಿ

  © Free Blogger Templates Spain by Ourblogtemplates.com 2008

Back to TOP