ನರಕ ದರ್ಶನ-೨: It's urgent and Important ಕಂಡ್ರಿ
'ಯಾಕ್ರಿ ಹಿಂಗೆ ಸಿಕ್ಕಿದ ಕಡೆ ಗಲೀಜು ಮಾಡ್ತೀರ' ಅಂತ ಕೇಳಿದರೆ,
'ಏನು ಮಾಡೋದು ಅರ್ಜೆಂಟ್ ಆದಾಗ ಸಿಕ್ಕಿದ ಕಡೆ ಉಯ್ಯಬೇಕಾಗುತ್ತೆ' ಅಂತ ಜನ ಹೇಳ್ತಾರೆ.
ಈಗ ನಗರದ ನಾನಾ ಕಡೆ ಸುಧಾಕ್ಕ ಕಟ್ಟಿಸಿದ 'ನಿರ್ಮಲ ಬೆಂಗಳೂರು' ಶೌಚಾಲಯಗಳಿವೆ. ಸುಮಾರು ವರ್ಷದಿಂದ ಸುಲಭ್ ಶೌಚಾಲಯಗಳು ಬಾಗಿಲು ತೆಗೆದುಕೊಂಡು ಕಾದು ಕುಂತಿವೆ. ಆದ್ರೂ ನಮ್ ಜನದುಡ್ಡು ಕೊಟ್ಟೆ ಮೂತ್ರ ಮಾಡೋದಾ..... ಛೆ ಇಲ್ಲಾ ಬಿಡಿ, ಅಂತಹ ಒಳ್ಳೆ ಕೆಲಸ ನಮ್ ಬೆಂಗ್ಳೂರು ಮಂದಿ ತಲೆಗೆ ಹೊಳೆಯೋದಿಲ್ಲ ಬಿಡಿ.
'ಗೋಡೆ ಮೇಲೆ ಇಲ್ಲಿ ಗಲೀಜು ಮಾಡಿದರೆ ದಂಡ ವಿಧಿಸಲಾಗುವುದು' ಅಂತ ಬರೆದ್ರೂ ಜನ ಹುಡುಕಿಕೊಂಡು ಅದೇ ಗೋಡೆ ಮೇಲೆ ವಿಸರ್ಜನೆ ಮಾಡುತ್ತಾರೆ ಅನ್ನೋದೇ ವಿಪರ್ಯಾಸ. ಬೆಂಗ್ಳೂರು ನಮ್ ಊರು ಅನ್ನೋ ಕಾಳಜಿ ಇದ್ದರೆ ಹಿಂಗೆಲ್ಲಾ ಆಗೋಲ್ಲ ಬಿಡಿ... ಮನಸ್ಸು ಶುದ್ಧವಾಗಿದ್ರೆ ಮನೆ ಸುತ್ತಾನೂ ಕ್ಲೀನ್ ಆಗಿರುತ್ತೆ ಅಲ್ವಾ?
ಬರಹ:ಮಲೆನಾಡಿಗ
ಚಿತ್ರ: ಮಲ್ನಾಡ್ , ವೀರೇಶ್ ಹೊಗೆಸೊಪ್ಪಿನವರ್
ಸ್ಥಳ: ಮಲ್ಲೇಶ್ವರ ೧೮ ನೇ ಅಡ್ಡರಸ್ತೆ
4 comments:
ಎಲ್ಲ ನಮ್ಮ ಕಣ್ಣಿನ ಮುಂದೆ ನಡೆದರು ನಾವು ಮೂಕ ಪ್ರೇಕ್ಷಕರಾಗಿರ್ತೆವೆ .......
ಒಂದು ಅತ್ಯುತ್ತಮ ಪ್ರಯತ್ನ! ನಿಮ್ಮ ಜೊತೆಗಿರುತ್ತೇನೆ. ಶುಭವಾಗಲಿ.
ನೀವು ಹೇಳಿದ ಮಾತು ನಿಜ.
ಆದರೆ, ಮಲ್ಲೇಶ್ವರ ೧೮ ನೇ ಅಡ್ಡರಸ್ತೆಯಲ್ಲಿ ಹೇಗೋ ಗೊತ್ತಿಲ್ಲ. ಆದರೆ ಬೆಂಗಳೂರಿನಲ್ಲಿರುವ ಅನೇಕ ನಿರ್ಮಲ ಮತ್ತು ಸುಲಭ್ ಗಳು ಸಮಯ ಕೈಗೂಡಿದಾಗಲೇ ಕೈ ಕೊಡುತ್ತವೆ. ಅವಸರ ಎಂದು ಅವಸರಿಕೊಂಡು ಅವುಗಳತ್ತ ಓಡಿಹೋದಾಗ ಬಾಗಿಲು ನೋಡಿಕೊಂಡು ಬರಬೇಕಾಗುತ್ತದೆ. ಇದನ್ನೇ ನನಗೆ ಬೇಕಾದಷ್ಟು ಜನ ಹೇಳಿದ್ದಾರೆ. ಇದು ನನ್ನ ಸ್ವಂತ ಅನುಭವ ಕೂಡ. ಆದರೆ ಶೌಚಾಲಯಗಳು ತೆಗೆದಿರುವ ಪಕ್ಷದಲ್ಲೂ ಫುಟ್ ಪಾತನ್ನೇ ಶೌಚಾಲಯ ಮಾಡಿಕೊಳ್ಳುವರು ಮನುಷ್ಯ ಜಾತಿಗೆ ಸೇರಿದವರಲ್ಲ ಬಿಡಿ...
ಈ ಸಮಸ್ಯೆಗೆ ನನ್ನದೊ೦ದು ಪರಿಹಾರ ಇಲ್ಲಿದೆ...
http://www.enidhi.net/2007/09/public-toilets-cant-we-make-them-free.html
Post a Comment