ನರಕ ದರ್ಶನ : ಟ್ರಾಫಿಕ್! ಟ್ರಾಫಿಕ್! ಟ್ರಾಫಿಕ್!
ಬಾರೋ ನಮ್ ಆಫೀಸ್‌ಗೆ,
ಎಲ್ಲೋ ನಿಮ್ಮ ಆಫೀಸು?
ಕೋರಮಂಗಲ ಕಣೋ,
ಅಯ್ಯೋ ಕೋರಮಂಗಲನಾ?
ಹೊಗೋ, ನಾನಿರೋದು ಮಲ್ಲೇಶ್ವರಂ. ಇಲ್ಲಿಂದ ಅಲ್ಲಿಗೆ ಬರೋಕೆ ಏನಿಲ್ಲ ಅಂದ್ರು ಒಂದರಿಂದ ಒಂದೂವರೆ ಗಂಟೆಗಳು ಬೇಕು! ನಾನು ಬರೋಲ್ಲ ಹೋಗೋ. ಇಂತಹ ಸಂಭಾಷಣೆ ಬೆಂಗಳೂರಿನಲ್ಲಿ ಸಾಮಾನ್ಯ. ಎಲ್ಲಿ ನೋಡಿದರೂ ಟ್ರಾಫಿಕ್! ಟ್ರಾಫಿಕ್! ಟ್ರಾಫಿಕ್! flyover ಮೇಲಿಂದ ರಸ್ತೆಯ ತುದಿಯವರೆಗೂ ವಾಹನಗಳು ನಿಂತಿರುತ್ತವೆ. ಯಾಕೆ ಹೀಗೆ ನಿಂತಿರುತ್ತೆ ಅಂತ ನೋಡಿದರೆ ಎಷ್ಟೋಂದು ಕಾರಣಗಳು ಸಿಗುತ್ತವೆ. ಅಂತಹವುಗಳಲ್ಲಿ ಕೆಲವುಗಳು ಇಲ್ಲಿವೆ ನೋಡಿ.
ಕೆಲವು ಕಡೆ ಸಿಗ್ನಲ್‌ಗಳ ಬಳಿಯೇ ಎಷ್ಟೋ ಪ್ರಯಾಣಿಕರು ಬಸ್ಸುಗಳಿಗಾಗಿ ಕಾಯ್ತಾ ಇರುತ್ತಾರೆ. ಅಂತಹ ಸಮಯದಲ್ಲಿ ಬಸ್ ಹತ್ತೋಕೆ ಜನ ಹೋದ್ರೆ. ಆ ಬಸ್ಸಿನ ಹಿಂದೆ ಎಷ್ಟೋ ಗಾಡಿಗಳು ನಿಂತಿರುತ್ತೆ. ಕೆಲವು ಕಡೆಗಳಲ್ಲಂತೂ ೩೦ ಸೆಕೆಂಡಿಗೆ ಸಿಗ್ನಲ್‌ಗಳಿರುತ್ತವೆ. ಬಸ್ಸುಗಳೇ ೩೦ ಸೆಕೆಂಡು ಸಮಯವನ್ನು ಮತ್ತೆ ನುಂಗಿ ಬಿಡುತ್ತವೆ. ಹಿಂದಿರುವ ವಾಹನಗಳಿಗೆ ಮತ್ತೆ ಹಸಿರು ನಿಶಾನೆಗೆ ಕಾಯುವ ಶಿಕ್ಷೆ. ಅಂತಹ ಸ್ಥಳಗಳಲ್ಲಿ ಸಾಲಾಗಿ ವಾಹನಗಳು ನಿಂತಿರದೇ ಬೇರೇ ವಿಧಿಯೇ ಇಲ್ಲ. ಇನ್ನು ಕೆಲವರು ತಮ್ಮ ದ್ವಿಚಕ್ರ ವಾಹನಗಳಲ್ಲಿ ಅತಿ ಹೆಚ್ಚು ಭಾರವಾದ ಹಾಗು ಅಗಲವಾದ ವಸ್ತುಗಳನ್ನು ಇಟ್ಟುಕೊಂಡು ಹೋಗ್ತಿರುತ್ತಾರೆ. ಅಂತಹ ಸಮಯದಲ್ಲಿ ಹಿಂದಿರುವ ವಾಹನಗಳಿಗೂ ಮುಂದೆ ಜಾಗ ಇರೋಲ್ಲ. ಮತ್ತೆ ಅವರಿಗೂ ಹೋಗೋಕೂ ಆಗೊಲ್ಲ. ಇಂತಹ ಸಮಯದಲ್ಲಿ ಸಾಲುಸಾಲಾಗಿ ವಾಹನಗಳು ನಿಂತಿರುತ್ತವೆ. ಹಲವರು ರಸ್ತೆ ಬಿಟ್ಟು ಫುಟ್ ಪಾತ್ ಮೇಲೆ ವಾಹನವನ್ನು ರಭಸವಾಗಿ ಚಲಿಸುತ್ತಾರೆ. ಇದರಿಂದ ಪಾದಚಾರಿಗಳಿಗೂ ತೊಂದರೆ, ವಾಹನ ಚಾಲಕರಿಗೂ ಕೂಡ.
ಇತ್ತೀಚೆಗಂತೂ ದ್ವಿಚಕ್ರ ವಾಹನ ಸವಾರರಲ್ಲಿ ಮೊಬೈಲ್ ಬಳಕೆ ಹೆಚ್ಚಾಗಿದೆ. ಮೊಬೈಲ್‌ನಲ್ಲಿ ಮಾತನಾಡುವುದಕ್ಕಿಂತ ಎಂ.ಪಿ.೩, ಎಫ್.ಎಂ. ಹೀಗೆ ಮನರಂಜನೆಗೆ ಮೊಬೈಲನ್ನು ಬಳಸುವವರೇ ಹೆಚ್ಚು. ಆಗ ಸವಾರರ ಗಮನ ಹೆಚ್ಚಾಗಿ ಸಂಗೀತದ ಕಡೆ ಇರುತ್ತದೆ ಮತ್ತು ಮುಂದಿರುವ ವಾಹನವನ್ನು ಹಿಮ್ಮೆಟ್ಟಿಸುವ ಹಟದಿಂದ ವೇಗವಾಗಿ ಹೋಗಲು ಪ್ರಯತ್ನಿಸುತ್ತಾರೆ. ಅಂತಹ ಸಮಯದಲ್ಲಿ ದೊಡ್ಡ ವಾಹನಗಳಿಗೆ ಹೋಗೋಕೆ ಜಾಗ ಇಲ್ಲದೇ ಟ್ರಾಫಿಕ್ ಜಾಮ್ ಆಗೋ ಸಾಧ್ಯತೆಗಳಿರುತ್ತದೆ. ಇತ್ತೀಚೆಗೆ ದ್ವಿಚಕ್ರ ವಾಹನಗಳು ಹಾಗೂ ಕಾರು ಮುಂತಾದ ವಾಹನಗಳ ದಟ್ಟಣೆ ಜಾಸ್ತಿ ಆಗ್ತಿದೆ. ಪಕ್ಕದ ಬೀದಿಗೆ ಹೋಗಬೇಕು ಅಂದ್ರೂ ದ್ವಿಚಕ್ರ ವಾಹನ ತಗೊಂಡು ಹೊಗ್ತಾರೆ. ಇನ್ನು ಎಷ್ಟೋ ಜನ ಪಾರ್ಕ್‌ಗಳಿಗೆ ವ್ಯಾಯಾಮಕ್ಕೆಂದು ಹೋಗುವಾಗ ತಮ್ಮ ವಾಹನವನ್ನು ತಗೊಂಡು ಹೋಗ್ತಾರೆ. ಇಂತಹ ಕಡೆ ಹೋಗುವಾಗಲಾದ್ರೂ ನಡೆದುಕೊಂಡು ಹೋದ್ರೆ ಸ್ವಲ್ಪ ಪ್ರಮಾಣದಲ್ಲಾದ್ರು ಟ್ರಾಫಿಕ್ ನ ತಡೆಗಟ್ಟಬಹುದು.
ಹೀಗೆ ಎಷ್ಟೋ ಕಾರಣಗಳಿಂದ ನಗರದಲ್ಲಿ ಟ್ರಾಫಿಕ್ ಜಾಮ್ ಆಗುತ್ತಿರುತ್ತೆ. ಇದಕ್ಕೆಲ್ಲ ಕಾರಣ ನಾವೇ. ನಾವು ಎಚ್ಚೆತ್ತುಕೊಂಡು ಸಂಚಾರಿ ನಿಯಮಗಳನ್ನು ಪಾಲಿಸುತ್ತಾ ಹೋದರೆ ಸ್ವಲ್ಪ ಮಟ್ಟಿಗಾದರೂ ಟ್ರಾಪಿಕ್ಕನ್ನು ಕಡಿಮೆ ಮಾಡಬಹುದು. ನೀವೇನಂತೀರಾ?
ಚಿತ್ರ ಹಾಗೂ ಬರಹ: ವೀರೇಶ್ ಹೊಗೆಸೊಪ್ಪಿನವರ್
0 comments:
Post a Comment