Sunday, March 9, 2008

ನರಕ ದರ್ಶನ -೫ : ಸರ್ವಶಕ್ತ ಇಲ್ಲಿ ಕಾವಲುಗಾರ


ಬೆಂಗಳೂರು ಗಲೀಜಾಗಿದೆ ಅಂತಾ ಈ ಮುಂಚೆನೇ ತೋರಿಸಿದ್ದರೂ. ಈ ಬಾರಿ ಅದಕ್ಕೆ ಪೂರಕವಾಗಿ ಕಲುಷಿತಗೊಂಡಿರುವ ಬೆಂಗಳೂರಿಗರ ಚಿತ್ರಣ ನೀಡುವ ಪ್ರಯತ್ನ ಇಲ್ಲಿದೆ.

'ಇಲ್ಲಿ ಗಲೀಜು ಮಾಡಬಾರದು; ಮಾಡಿದರೆ ಶಿಕ್ಷೆಗೆ ಗುರಿಪಡಿಸಲಾಗುವುದು' ಎಂದು ಗೋಡೆ ಮೇಲೆ ಬರೆದು ಬರೆದು ನಮ್ಮ ಜನಕ್ಕೆ ಸಾಕಾಗಿ ಹೋಗಿದೆ. ಬೆಂಗಳೂರಿನ ಮಹಾನಾಗರೀಕರು ತಮ್ಮ ಮನೆಯ ಗೋಡೆಯ ಸರಂಕ್ಷಣೆಗೆ ಈಗ ಹೊಸ ಮಾರ್ಗ ಕಂಡುಕೊಂಡಿದ್ದಾರೆ. ಅದೇನೆಂದರೆ ಮನೆಯ ಗೋಡೆಗಳನ್ನು ಕಾಯಲು ಕಾವಲುಗಾರರನ್ನು ನೇಮಿಸಿದ್ದಾರೆ. ಅದೂ ಸಾಮಾನ್ಯದವರಲ್ಲ, ದೇವಾನುದೇವತೆಗಳನ್ನೇ.. ಹುಬ್ಬೇರಿಸಬೇಡಿ... ಇದು ನಿಜ... ಈಗಾಗಲೇ ನೀವು ಈ ದೃಶ್ಯವನ್ನು ನೋಡಿರಬಹುದು.

ನಗರದ ಅನೇಕ ಗೋಡೆಗಳ ಮೇಲೆ ಹಾಕಿರುವ'ದೇವರುಗಳ ಟೈಲ್ಸ್ ಚಿತ್ರವನ್ನು. ಇದರ ಜೊತೆಯಲ್ಲಿ ರೆಡಿಮೇಡ್ ಬರಹ 'ಇಲ್ಲಿ ಗಲೀಜು ಮಾಡಬೇಡಿ, ಒಂದಾ ಮಾಡಬೇಡಿ, ಶಿಕ್ಷೆಗೆ ಗುರಿಪಡಿಸಲಾಗುವುದು'. 'ಇಲ್ಲಿ ಚಿತ್ರವನ್ನು ಅಂಟಿಸಬೇಡಿ' ವಗೈರೆ ವಗೈರೆ......

ದೇವರ ಚಿತ್ರವನ್ನು ಹಾಕುವಲ್ಲಿ ಕೆಲವರಂತೂ ಸರ್ವಧರ್ಮೀಯರಾಗಿರುತ್ತಾರೆ ಎಲ್ಲಾ ಮತದ ದೇವರುಗಳ ಚಿತ್ರ ಯಾ ಧಾರ್ಮಿಕ ಚಿಹ್ನೆಯನ್ನು ಬಳಸುತ್ತಾರೆ. ಕೆಲವರು ವಾಸ್ತು, ದೋಷ ಪರಿಹಾರ ಇನ್ನಿತರ ಕಾರಣ ಹೇಳಿ ಮನೆಯ ಮುಂದೆ ದೇವರ ಪಟ ಹಾಕಿರುವುದನ್ನು ನೋಡಿರಬಹುದು. ಆದರೆ ಮನೆ ಕಾಪೌಂಡ್ ತುಂಬಾ ದೀಪಾವಳಿಯಲ್ಲಿ ದೀಪದ ಸಾಲು ಇಟ್ಟ ಹಾಗೆ ದೇವರ ಚಿತ್ರ ಹಾಕಿ ಜೊತೆಗೆ ಗಲೀಜು ಮಾಡಬೇಡಿ ಅಂತಾ ಹಾಕೋ ಗಲೀಜು ಮನಸ್ಸಿನ ಬೆಂಗಳೂರಿಗೆ ಏನೆಂದು ಹೇಳೋಣ ಹೇಳಿ.

ಅಲ್ಲಾ ಕಂಡ್ರಿ ಸರ್ವಶಕ್ತ, ಸರ್ವವ್ಯಾಪಿ ಎಂದು ದೇವರನ್ನು ಹೇಳುತ್ತೇವೆ. ಅಂತಾ ದೇವರಿಗೆ ಈ ದುರ್ಗತಿ ಬಂದರೆ ಹೇಗೆ ಹೇಳಿ? ದೇವರು ಅಂತಾ ಹೇಳಿದರೆ ಸಾಕು ಪೂಜ್ಯ ಭಾವನೆ ಬರುತ್ತದೆ. ಅದು ಯಾವುದೇ ಧರ್ಮದ ದೇವರಿರಬಹುದು. ದೇವರು ನಿರಾಕಾರ ಅಥವಾ ಆಕಾರವುಳ್ಳವ ನಾಗಿರಬಹುದು ಅದು ಇಲ್ಲಿ ಅಪ್ರಸ್ತುತ. ನನ್ನ ಪ್ರಶ್ನೆ ಇಷ್ಟೆ ಎಲ್ಲರೂ ಪೂಜ್ಯ ಭಾವನೆಯಿಂದ ಕಾಣುವ ದೇವರನ್ನು ತಮ್ಮ ಮನೆಯ ಗೋಡೆಗಳ ಅಂದವ ಕಾಪಾಡುವುದಕ್ಕೋಸ್ಕರ ಬಳಸುವುದು ಸರಿಯೇ?. ದೇವರ ಚಿತ್ರವಿದ್ದರೆ ಭಯದಿಂದಲೋ, ಭಕ್ತಿಯಿಂದಲೋ ಅಥವಾ ಇವೆರಡರ ಮಿಶ್ರಣದಿಂದಲೋ ಏನೋ ಜನ ಗೋಡೆಯ ಮೇಲೆ ಗಲೀಜು ಮಾಡುವುದಿಲ್ಲ ಎಂಬ ದೂ(ದು)ರುದ್ದೇಶ ನಿಮಗಿದ್ದರೆ.. ಇಟ್ಸ್ ವೇರಿ ಬ್ಯಾಡ್... ಬೆಂಗಳೂರಿನ ಬುದ್ಧಿವಂತ (ಅ)ನಾಗರೀಕರೇ ನಿಮ್ಮ ದೇವರು ನಿಮ್ಮ ಮನೆಯ ಒಳಗಿರಲಿ. ಮನದೊಳಗಿರಲಿ. ನಿಮ್ಮ ಮನೆ ಗೋಡೆ ಕಾಯಲಿಕ್ಕೆ ಬಿಡಬೇಡಿ.

ಇದಕ್ಕೆ ಒಂದು ಪೂರಕವಾದ ಮೊಬೈಲ್ ಸಂದೇಶ 'ವಿಶ್ವ ಇಂದು ಸಂಕಷ್ಟದ ಸ್ಥಿತಿಯಲ್ಲಿರುವುದು ಕೆಟ್ಟ ಜನಗಳ ದುಷ್ಟ ಕೆಲಸದಿಂದಲ್ಲ; ಕೆಲಸ ಮಾಡಿದೆ ಸುಮ್ಮನಿರುವ ಬುದ್ಧಿಜೀವಿಗಳಿಂದ'. ನನಗನ್ನಿಸಿದ್ದು ಇದೇ ರೀತಿ ಬೆಂಗಳೂರಿನ ಬುದ್ಧಿಜೀವಿಗಳು(ವಿಶೇಷಣವಾಗಿ ಮಾತ್ರ) ದೇವರನ್ನು ಈ ರೀತಿ ದುಡಿಸಿಕೊಳ್ಳುವುದು ತರವಲ್ಲವೆನಿಸುತ್ತದೆ ನೀವು ಏನಂತೀರಿ?

ಚಿತ್ರ, ಬರಹ: ಮಲೆನಾಡಿಗ

1 comments:

Chetan March 13, 2008 at 10:34 PM  

ಸಾರ್ವಜನಿಕರು ಗಲೀಜು ಮಾಡಬಾರದೆಂದು ದೇವರ ಚಿತ್ರಗಳನ್ನು ಹಾಕಿ ಜನರಿಗೆ ಮುಜುಗರವುಂಟುಮಾಡುವುದು ಹಾಗು ದೇವರ ಭಯ(?)-ಭಕ್ತಿ ಗಳಿಂದ ಜನರು ಗಲೀಜು ಮಾಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಆ ಮಾಲೀಕರು ಏಷ್ಟರ ಮಟ್ಟಿಗೆ ಸಫಲರಾಗಿದ್ದಾರೋ ಗೊತ್ತಿಲ್ಲ.... ದೇವರಿಗೆ ಇಂತಹ ಕೆಲಸವನ್ನೂ ಹಚ್ಚುವಂತಹ ಸ್ಥಿತಿ ಬಂತಲ್ಲ ಅಂತ

ಹಾಡು ಕೇಳಿ

ಟ್ರಾಫಿಕ್ ಮಾಹಿತಿ

  © Free Blogger Templates Spain by Ourblogtemplates.com 2008

Back to TOP